Index   ವಚನ - 310    Search  
 
ಕಾಳುದೈವಕ್ಕೆ ಕೈಯತ್ತಲೊಲ್ಲದೆ ಕಾರಣಮೂರ್ತಿಯ ಕರೆತಂದು ಪೂಜೆಯ ಮಾಡಿ, ಭವಿಮುಟ್ಟದ ವರತೆಯ ನೀರ ತಂದು, ಪಶುಕಾಲು ಸೋಂಕದ ಧಾನ್ಯಗೂಡಿ, ಮಾಡದ ಒಲೆಯಲ್ಲಿ ಮಾಡಿದ ಪಾಕವ ಚಲುವಾಗಿ ನೀಡಿದರೆ ಒಲಿದು ಬಂದೆನ್ನಪ್ಪಿದ ಗುರುನಿರಂಜನ ಚನ್ನಬಸವಲಿಂಗ.