Index   ವಚನ - 332    Search  
 
ಸಕಲವನಳಿದುಳಿದು ಶರಣೆಂದು ಕೊಂಡಾಡುವಲ್ಲಿ ಪಂಚಾಚಾರಮೂರ್ತಿಯೊಳಗೆ ಕರ್ಮಾಂಗಸ್ವರೂಪವಾದ ಭಕ್ತನಡಗಿ ಕಾಣಿಸುತಿರ್ದನು. ಮಂತ್ರಾತ್ಮಕ ಸ್ವರೂಪವಾದ ಮೂರ್ತಿಯೊಳಗೆ ವಿದ್ಯಾಂಗಸ್ವರೂಪವಾದ ಮಾಹೇಶ್ವರನಡಗಿ ಕಾಣಿಸುತಿರ್ದನು. ನಿರೀಕ್ಷಣಾಮೂರ್ತಿಯೊಳಗೆ ಕಾಮಾಂಗಸ್ವರೂಪವಾದ ಪ್ರಸಾದಿಯಡಗಿ ಕಾಣಿಸುತಿರ್ದನು. ಯಜನಮೂರ್ತಿಯೊಳಗೆ ಯೋಗಾಂಗಸ್ವರೂಪವಾದ ಪ್ರಾಣಲಿಂಗಿಯು ಅಡಗಿ ಕಾಣಿಸುತಿರ್ದನು. ಸ್ತೌತ್ಯಮೂರ್ತಿಯೊಳಗೆ ಭೂತಾಂಗಸ್ವರೂಪವಾದ ಶರಣನಡಗಿ ಕಾಣಿಸುತಿರ್ದನು. ತೃಪ್ತಿ ಮೂರ್ತಿಯೊಳಗೆ ಶಿವಾಂಗಸ್ವರೂಪವಾದ ಶರಣನೈಕ್ಯನಡಗಿ ಕಾಣಿಸುತಿರ್ದನು. ಮುಂದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಸಾದಿಯಾಗಿ ಕಾಣಿಸುತಿರ್ದನು.