ಮೂರುಮುಖದಗ್ನಿಯ ಸುಟ್ಟು,
ಮೂರುಬಣ್ಣದ ಹೇಸಿಕೆಯ ತೊಳೆದು,
ಮೂರು ಮನೆಯಲ್ಲಿ ದೇವರ ಪೂಜೆಯ ಮಾಡಿ,
ಇದ್ದುದ ಕಳಚದೆ ಸಂಚಲವಳಿದು,
ಸಮರ್ಪಿಸಿಕೊಳ್ಳಬಲ್ಲ ಸಗುಣ ನಿರ್ಗುಣ ಸಂಪನ್ನಂಗಲ್ಲದೆ
ಸಾಧ್ಯವಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗ.
Art
Manuscript
Music
Courtesy:
Transliteration
Mūrumukhadagniya suṭṭu,
mūrubaṇṇada hēsikeya toḷedu,
mūru maneyalli dēvara pūjeya māḍi,
idduda kaḷacade san̄calavaḷidu,
samarpisikoḷḷaballa saguṇa nirguṇa sampannaṅgallade
sādhyavalla kāṇā guruniran̄jana cannabasavaliṅga.