Index   ವಚನ - 336    Search  
 
ಲಿಂಗಸಂಬಂಧಿಗಳೆಂದು ಹೇಳಿಕೊಂಬ ಹೆಂಗಳೆ ಹೇಮಲೋಷ್ಠ್ರ ರತಿಸಂಯುಕ್ತ ಮತಿನಾಶ ಮಲಭುಂಜಕರು, ಅತೀತಪ್ರಸಾದವನರಿದರ್ಪಿಸಿಕೊಂಬ ಭೇದವನರಿಯದೆ ಹಸಿವಿನೊಡಲಿಗೆ ಹವಣವರಿಯದೆ ಜಿನುಗುವ ಜಿಹ್ವೆಲಂಪಟಗೂಡಿ ಕೈದುಡುಕಿಗಳಿಂದೆ ನೆಗೆನೆಗೆದು ಕೊಂಬ ಅಘಬಂಧರೆತ್ತ? ಅಪ್ರತಿಮನೆತ್ತ? ಸಲೆ ತತ್ವವೆತ್ತ? ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿರ್ದ ಅನುಪಮ ಪ್ರಸಾದಿಯೇ ನಿತ್ಯ ಕಾಣಾ.