ಪ್ರಸಾದವ ಪಡೆದವರೆಂದು ಬದ್ಧಸಂಕಲ್ಪ
ದುರ್ವರ್ತನೆಗಳನೇನೆಂಬೆನಯ್ಯಾ!
ಗಣಸಮೂಹದಲ್ಲಿ ಸೌಖ್ಯವಿಲ್ಲೆಂದು ಚಿಕ್ಕ ಬಟ್ಟಲಲ್ಲರ್ಪಿಸಿಕೊಂಡು,
ಪೂರ್ವ ಬಳಗಗೂಡಿ ಹಂದಿ ನಾಯಿಯಂತೆ ಒಗೆದಾಡಿ ತಿಂಬುವ
ಬೆಂದ ನರಕಿಗಳಿಗೆ ಪ್ರಸಾದವೆಲ್ಲಿಹದಯ್ಯಾ?
ಪ್ರಸಾದಿ ಒಮ್ಮೆ ಪ್ರಸಾದವ ಸೇವಿಸಿ,
ಒಮ್ಮೆ ಉಚ್ಛಿಷ್ಟಕೂಳ ಸೇವಿಸುವನೆ?
ಛೀ ಅದೇತರ ನಡೆನುಡಿ ಅತ್ತ ಹೋಗಿ,
ನಮ್ಮ ಗುರುನಿರಂಜನ ಚನ್ನಬಸವಲಿಂಗಶರಣರ
ತಿಂಥಿಣಿಯ ಸೋಂಕದೆ.
Art
Manuscript
Music
Courtesy:
Transliteration
Prasādava paḍedavarendu bad'dhasaṅkalpa
durvartanegaḷanēnembenayyā!
Gaṇasamūhadalli saukhyavillendu cikka baṭṭalallarpisikoṇḍu,
pūrva baḷagagūḍi handi nāyiyante ogedāḍi timbuva
benda narakigaḷige prasādavellihadayyā?
Prasādi om'me prasādava sēvisi,
om'me ucchiṣṭakūḷa sēvisuvane?
Chī adētara naḍenuḍi atta hōgi,
nam'ma guruniran̄jana cannabasavaliṅgaśaraṇara
tinthiṇiya sōṅkade.