Index   ವಚನ - 347    Search  
 
ನಡೆನಡೆದು ಸಡಗರದಲ್ಲಿಪ್ಪ ಶಿವಜ್ಞಾನಿ ಶರಣನು, ಪಡೆದರ್ಥದಿಂದೊಡವೆರೆದು ಸುಖಿಸುವಲ್ಲಿ, ಅಡಿಗಡಿಗೆ ಅವಧಾನಭರಿತನಾಗಿ, ಅಂಗಮನಭಾವದನುವರಿದು ಅರ್ಪಿಸಿಕೊಳ್ಳಬಲ್ಲ ಪರಮಪರಿಣಾಮಿ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ.