ಕಸಗೂಡಿದ ಭೂಮಿಯಲ್ಲಿ ಸಸಿ ಪಲ್ಲೈಸುವುದೇ?
ಅನಾದಿ ಮಲಸಂಬಂಧ ಕಾಯದಲ್ಲಿ ಗುರೂಪದೇಶ ಫಲಿಸಲರಿಯದು.
ಭೂತದೇಹಿಗಳಿಗೆ ಪ್ರಸಾದವಕೊಟ್ಟರೆ ಅಘೋರನರಕತಪ್ಪದು,
ಅದೇನು ಕಾರಣ? ಗುರುನಿರಂಜನ ಚನ್ನಬಸವಲಿಂಗದ
ಲೀಲೆಯ ನಟಿಸುವರಾಗಿ.
Art
Manuscript
Music
Courtesy:
Transliteration
Kasagūḍida bhūmiyalli sasi pallaisuvudē?
Anādi malasambandha kāyadalli gurūpadēśa phalisalariyadu.
Bhūtadēhigaḷige prasādavakoṭṭare aghōranarakatappadu,
adēnu kāraṇa? Guruniran̄jana cannabasavaliṅgada
līleya naṭisuvarāgi.