Index   ವಚನ - 351    Search  
 
ಹಡೆದವರಿಂದೆ ಪಡೆದ ಪ್ರಸಾದವ ಹಿಡಿದುಕೊಟ್ಟು, ನೋಡಿಕೊಟ್ಟು, ತಿಳಿದುಕೊಟ್ಟು, ನಿತ್ಯಸುಖಿಸುವನಲ್ಲದೆ ಜಡದೇಹದೊಡವೆಯ ಸುಖವಿಡಿದು ಒಡೆಯರ ಪ್ರಸಾದವ ಪಡೆದವರೆಂದು ಓಗರವ ಗಡಣಿಸಿಕೊಂಡು ಮೃತ್ಯುಂಜಯಲಿಂಗಕ್ಕೆ ತೋರಿ ತೋರಿ ಉಂಬ ಡಂಭಕನಂತಲ್ಲ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಪ್ರಸಾದಿ