ಜಂಗಮವಿರಹಿತ ಲಿಂಗಾರ್ಪಿತ
ಸಂಗವಿಲ್ಲದ ಸತಿಪತಿಯಂತೆ ಸುಖವೆಲ್ಲಿಹದೊ!
ಕಂಗಳರಿಯದ ನೋಟ
ಕನಸಿನೊಳಗಿನ ಬೇಟ ನಿಜವೆಲ್ಲಿಹದೊ!
ಇದು ನಿಜವಲ್ಲ, ಗುರುನಿರಂಜನ
ಚನ್ನಬಸವಲಿಂಗಕ್ಕೆ ದೂರ.
Art
Manuscript
Music
Courtesy:
Transliteration
Jaṅgamavirahita liṅgārpita
saṅgavillada satipatiyante sukhavellihado!
Kaṅgaḷariyada nōṭa
kanasinoḷagina bēṭa nijavellihado!
Idu nijavalla, guruniran̄jana
cannabasavaliṅgakke dūra.