Index   ವಚನ - 368    Search  
 
ಮಾಡಿ ಕಾಣುವದು ಗುರುಸೇವೆಯ, ನೋಡಿ ಕಾಣುವದು ಶಿವಲಿಂಗವ, ನೀಡಿ ಕಾಣುವದು ಜಂಗಮಕ್ಕೆ. ಈ ತ್ರಿವಿಧದೊಳೊಂದನಗಲಿದರೆ ಸಂದೇಹ ಸಂಬಂಧ. ಜ್ಞಾನವಿಲ್ಲದಾಚಾರ ಅನಾಚಾರವಾದುದಾಗಿ, ಜಂಗಮವಿಲ್ಲದ ಮಾಟಕೋಟಲೆಗೊಳಗಾಗಿತ್ತು ಗುರುನಿರಂಜನ ಚನ್ನಬಸವಲಿಂಗಾ.