ಕಾಲಿಲ್ಲದ ಗುರು ಕಣ್ಣಿಲ್ಲದ ಕಂದಗೆ
ಬಣ್ಣವಿಲ್ಲದ ತಲೆಯ ತೋರಿದರೆ
ಕೈಯಿಲ್ಲದೆ ಹಿಡಿದು ಕರ್ಮವಿಲ್ಲದ
ಕಾಯದ ಮೇಲೆ ಮಡಗಿದರೆ
ಹೊರಗೊಳಗೆ ಸುಳಿವುದೈ.
ಆ ಸುಳಿಹಿನ ಬೆಳಗಿನೊಳಗೆ
ಕಳೆಯುಳ್ಳ ಪುರುಷನ ಪುತ್ಥಳಿಯ ಕಂಡೆನೈ.
ಆ ಪುತ್ಥಳಿಗೆ ಸಕಲವ ಕೊಟ್ಟು
ನಿಃಕಲವ ನಿಲಿಸಿ ನಿರಂಜನವನಿತ್ತಡೆ
ಎತ್ತಿಕೊಂಡಿತ್ತ ತನ್ನ ಗುರುನಿರಂಜನ
ಚನ್ನಬಸವಲಿಂಗ ಪ್ರಸಾದಿಗೆ.