Index   ವಚನ - 401    Search  
 
ಅನುವನರಿಯದ ಮನುಜರು ಘನಲಿಂಗಸನ್ನಿಹಿತರೆಂದು ಅನ್ಯದೈವವನೆ ಮನೆಯೊಳಗಿರಿಸಿ ದೀಕ್ಷವ ಮಾಡಿಸಿಕೊಂಡು ನಡೆವ ಮಂದಮತಿ ಹೀನಜಾತಿ ದ್ರೋಹಿಗಳನೇನೆಂಬೆನಯ್ಯಾ? ಜರಿದು ಹರಿದು ಮರೆದು ನಡೆವ ಪರಿಪೂರ್ಣಂಗಲ್ಲದೆ ಗುರುನಿರಂಜನ ಚನ್ನಬಸವಲಿಂಗವೆಂಬ ಘನಪ್ರಸಾದ ಸಾಮಾನ್ಯವೇ ಹೇಳಾ?