Index   ವಚನ - 400    Search  
 
ಭಾವಮರೆದು ಭಕ್ತಿಯ ಮಾಡುವರು; ಬರುಕಾಯರಿಗೆ ಸುಖವೆಲ್ಲಿಹದೋ! ಭಾವಮರೆದು ಪೂಜೆಯ ಮಾಡುವರು; ಹುಸಿಮನಯುಕ್ತರಿಗೆ ರತಿಪ್ರೇಮವೆಲ್ಲಿಹದೊ! ಭಾವಮರೆದು ದಾಸೋಹವ ಮಾಡುವರು; ಭ್ರಾಂತಂಗೆ ಪರಿಣಾಮವೆಲ್ಲಿಹದೊ! ಭಾವಮರೆದು ಗುರುನಿರಂಜನ ಚನ್ನಬಸವಲಿಂಗಕ್ಕರ್ಪಿಸಿ ಕೊಂಡೆವೆಂಬುವರು ದ್ವೈತರು ಪ್ರಸಾದವೆಲ್ಲಿಹದೊ!