Index   ವಚನ - 407    Search  
 
ಅನಾದಿವಿಡಿದು ಬಂದ ಸದೋದಿತ ಶರಣಂಗೆ ನಾದ ಬಿಂದು ಕಳೆಯ ಸುಖ ಹಿಂಗಿ, ಆದಿ ಮಧ್ಯ ಅವಸಾನ ಸನ್ನಿಹಿತವಾಗಿ, ಮಾರ್ಗವಿಡಿದಡಿಯಿಟ್ಟು ಸಾವಧಾನಿ ಸಂಭಾವಿತ ನೋಡಾ. ಆದಿ ಅನಾದಿಯನರಿದು ಆರೋಗಣೆಯಮಾಡಿಕೊಂಬ ಸುಖಾನುಭಾವಿ ನಿಮ್ಮ ಪ್ರಸಾದಿ ನೋಡಾ, ಗುರುನಿರಂಜನ ಚನ್ನಬಸವಲಿಂಗಾ.