Index   ವಚನ - 415    Search  
 
ಕರಣತ್ರಯದಪ್ಪುಗೆಯ ಪರಿಹರಿಸದೆ ಮರಣವ ಗೆದ್ದೆವೆಂಬ ಬರುನುಡಿಯ ಕಂಗುರುಡರನೇನೆಂಬೆನಯ್ಯಾ? ತ್ರಿವಿಧಭಕ್ತಿಯನರಿಯದೆ ತ್ರಿವಿಧಮಲಸಂಬಂಧವಾಗಿ ತ್ರಿಕೂಟವ ಕಂಡವರೆಂದು ಕೂಗಿದರೆ ಗೂಗೆ ಕಾಗೆಯ ಕೂಗಿನಂತೆ ಸೊಗಸದಯ್ಯಾ. ನಿಮ್ಮ ಶರಣರಿಗೆ ಕೊಡುಕೊಳ್ಳಿಯುಳ್ಳರೆ ಭವ ತಪ್ಪದೆಂದು ನುಡಿದುಂಡು ನಡೆಗೆಟ್ಟು ಹೋಗುವ ತುಡುಗುಣಿಗಳ ಕೆಡಹಿ ಮೂಗಕೊಯ್ವ ಗುರುನಿರಂಜನ ಚನ್ನಬಸವಲಿಂಗ.