ಗಂಡುಹೆಣ್ಣಲ್ಲದಾರು ಹನ್ನೊಂದುಕೋಟಿಗಳನಳಿದು
ನೀಟವಾಗಿಷ್ಟವಹಿಡಿದು
ಮಾಟಗಳೆದು ಮಾಡಿದರೆಮ್ಮ ಬಸವಾದಿಪ್ರಮಥರು.
ಅವರಾಟವನರಿದು ಮಾಡುವಲ್ಲಿ ಪಂಚೇಂದ್ರಿಯಂಗಳಲ್ಲಿ
ಪ್ರಕಾಶ ಮುಂದುವರಿಯಬೇಕು.
ವಿಷಯಂಗಳಲ್ಲಿ ಕಳೆ ಸೂಸುತಿರಬೇಕು,
ಕರಣಂಗಳಲ್ಲಿ ಬೆಳಗು ಬೆಂಬಳಿಗೊಂಡಿರಬೇಕು.
ಗುರುನಿರಂಜನ ಚನ್ನಬಸವಲಿಂಗದ ಪ್ರಭೆಯೊಳಡಗಿ
ಆಚರಿಸುತ್ತಿರಬೇಕು.
Art
Manuscript
Music
Courtesy:
Transliteration
Gaṇḍ'̔uheṇṇalladāru hannondukōṭigaḷanaḷidu
nīṭavāgiṣṭavahiḍidu
māṭagaḷedu māḍidarem'ma basavādipramatharu.
Avarāṭavanaridu māḍuvalli pan̄cēndriyaṅgaḷalli
prakāśa munduvariyabēku.
Viṣayaṅgaḷalli kaḷe sūsutirabēku,
karaṇaṅgaḷalli beḷagu bembaḷigoṇḍirabēku.
Guruniran̄jana cannabasavaliṅgada prabheyoḷaḍagi
ācarisuttirabēku.
ಸ್ಥಲ -
ಪ್ರಸಾದಿಯ ಪ್ರಾಣಲಿಂಗಿಸ್ಥಲ