Index   ವಚನ - 431    Search  
 
ಅಯ್ಯಾ, ಆನು ನಿನಗೆಂದು ಬಂದೆ, ನಿನಗೆಂದು ನೋಡಿಹಿಡಿದೆ, ನಿನಗೆ ಶರಣೆಂದು ನಿನ್ನಿಂದೆ ನಿನ್ನ ಕೊಂಡೆ, ನಿನ್ನ ಸೆರಗ ಹಿಡಿದು ಸತಿಭಾವ ತಪ್ಪದೆ ನಿನಗೆ ನಾನೆತ್ತಿ ಇತ್ತು ಸುಖಿಸಿದಡೆ ಉತ್ತುಮತೆಯಾದೆನಯ್ಯಾ ಉರುನಿರಂಜನ ಚನ್ನಬಸವಲಿಂಗ.