ಅತ್ತತ್ತಲಾದ ಅನುಪಮಲಿಂಗ ತನ್ನ ವಿನೋದಕ್ಕೆ ತಾನೇ
ಶರಣನಾಗಿ ಜಂಗಮವಾಗಿ ಭಕ್ತನಾಗಿ
ಲಿಂಗವಾಗಿ ಶಿಷ್ಯನಾಗಿ ಗುರುವಾಗಿ
ಕ್ರಿಯಾಜ್ಞಾನ ಭಾವಾಚಾರವಿಡಿದು,
ಪರಿಪೂರ್ಣಾಚಾರದೊಳು ನಿಂದು ವರ್ತಿಸುವ
ಪರಮಾನಂದಸುಖಭೋಕ್ತನೆಂಬ ಭೇದವನರಿಯದೆ,
ಭಿನ್ನವಿಟ್ಟು ನುಡಿವ ಮರುಳು ಕುನ್ನಿ ಮಾನವರ
ಎನ್ನ ಗತಿಮತಿಯತ್ತ ತಾರದಿರಾ,
ಗುರುನಿರಂಜನ ಚನ್ನಬಸವಲಿಂಗಾ,
ನಿಮ್ಮ ಧರ್ಮ ನಿಮ್ಮ ಧರ್ಮ.