ಗುರುವಿನಲ್ಲಿ ಗುಣವನರಸಿ ಕಡಿದುಹಾಕಿದಲ್ಲಿ
ಎನಗೆ ಶುದ್ಧಪ್ರಸಾದ ಸಾಧ್ಯವಾಯಿತ್ತು.
ಲಿಂಗದಲ್ಲಿ ಶಿಲೆಯನರಸಿ ಸುಟ್ಟು ಬಿಸಾಟಿದಲ್ಲಿ
ಎನಗೆ ಸಿದ್ಧಪ್ರಸಾದ ಸಾಧ್ಯವಾಯಿತ್ತು.
ಜಂಗಮದಲ್ಲಿ ಕುಲವನರಸಿ ಕೊಂದು ಹಾಕಿದಲ್ಲಿ
ಎನಗೆ ಪ್ರಸಿದ್ಧಪ್ರಸಾದ ಸಾಧ್ಯವಾಯಿತ್ತು.
ಇಂತು ಇವರ ದುರ್ಗುಣ ಕಠಿಣ ಅಕುಲವನರಸದೆ
ಕೊಡುಕೊಳ್ಳೆ ಸಮರಸದೊಳಿರ್ದೆನಾದಡೆ
ಕಡೆಯಿಲ್ಲದ ನರಕವೆಂಬ ಶ್ರುತಿ
ಗುರುಸ್ವಾನುಭಾವದಿಂದರಿದು ನೂಂಕಿ
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಸಮರಸಪ್ರಸಾದಿಯಾಗಿರ್ದೆನಯ್ಯಾ.
Art
Manuscript
Music
Courtesy:
Transliteration
Guruvinalli guṇavanarasi kaḍiduhākidalli
enage śud'dhaprasāda sādhyavāyittu.
Liṅgadalli śileyanarasi suṭṭu bisāṭidalli
enage sid'dhaprasāda sādhyavāyittu.
Jaṅgamadalli kulavanarasi kondu hākidalli
enage prasid'dhaprasāda sādhyavāyittu.
Intu ivara durguṇa kaṭhiṇa akulavanarasade
koḍukoḷḷe samarasadoḷirdenādaḍe
kaḍeyillada narakavemba śruti
gurusvānubhāvadindaridu nūṅki
guruniran̄jana cannabasavaliṅgadalli
samarasaprasādiyāgirdenayyā.