Index   ವಚನ - 455    Search  
 
ಅಂದು ಬಂದ ಮುಸುಕು ತೆರೆದು ಹೊಂದಿಸಿಕೊಂಡು ಅಂದಂದಿಂಗವಧಾನ ಸುಖಾನಂದಮಯದೊಳಗೆ ಸುಳಿವುತಿರ್ದನಾಚಾರಲಿಂಗವೆನ್ನ ಸುಚಿತ್ತಪಾಣಿಯಲ್ಲಿ. ಶ್ರದ್ಧೆಸುಖಪರಿಣಾಮಿಯಾಗಿ ಮುಂದ ನೋಡುತ್ತ ಸುಳಿಯುತಿರ್ದ ಗುರುಲಿಂಗವೆನ್ನ ಸುಬುದ್ಧಿಹಸ್ತದಲ್ಲಿ. ನಿಷ್ಠೆ ಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಶಿವಲಿಂಗವೆನ್ನ ನಿರಹಂಕಾರ ಪಾಣಿತಾಣದಲ್ಲಿ. ಸಾವಧಾನಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಜಂಗಮಲಿಂಗವೆನ್ನ ಸುಮನಹಸ್ತದಲ್ಲಿ. ಅನುಭಾವಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಪ್ರಸಾದಲಿಂಗವೆನ್ನ ಸುಜ್ಞಾನಕರಸ್ಥಲದಲ್ಲಿ. ಆನಂದಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಮಹಾಲಿಂಗವೆನ್ನ ಸದ್ಭಾವಹಸ್ತದಲ್ಲಿ. ಸಮರಸಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಗುರುನಿರಂಜನ ಚನ್ನಬಸವಲಿಂಗವೆನ್ನ ಪ್ರಾಣಲಿಂಗಿಯೆಂದೆನಿಸಿ.