Index   ವಚನ - 463    Search  
 
ಬೊಮ್ಮತಿಮ್ಮರರಿಯಬೇಕೆಂದು ಅಡರಿಹೊಕ್ಕು ಕಂಗೆಟ್ಟು ಬಳಲಿ ಅಂಗಭಂಗವಾದುದರಿಯದೆ ಹಾದಿ ಬೀದಿಯವೊಡ ಕೇಳಿ ಸಾಧಿಸಿ ಕಂಡೆನೆಂಬ ಭೇದವಾದಿಗಳನೇನೆಂಬೆನಯ್ಯಾ? ನಾದಬಿಂದುಕಲಾತೀತ ನಿಜಾನಂದ ನಿರ್ಮಲ ಅಖಂಡತೇಜೋಮಯಲಿಂಗವ ಆದಿಮುಖದಿಂದೆ ಸಾಧಿಸಿಕೊಂಡರಿದು ಅಂಗ ಮನ ಭಾವಂಗಳಲ್ಲಿ ಸಂಗಸಂಯೋಗಿಯಾದ ಮಂಗಳಮಹಿಮ ಶರಣರಿಗಲ್ಲದೆ ಅರಿಯಬಹುದೆ ಗುರುನಿರಂಜನ ಚನ್ನಬಸವಲಿಂಗಾ?