Index   ವಚನ - 467    Search  
 
ಶ್ರದ್ಧೆಯಲ್ಲಿ ಮುಳುಗಿದರೆ ನೈಷ್ಠೆ ನೆರೆಯುವುದು, ಸಾವಧಾನ ಸಂಭವಿಸುವುದು. ಅನುಭಾವವಿಡಿದು ಆಚರಿಸುವ ಪ್ರಾಣಲಿಂಗಿಯ ಮನಸ್ಸು ಆನಂದವನು ಬಯಸುತ್ತಿಹುದು, ಕರ್ಮವನು ಕತ್ತರಿಸುತ್ತಿಹುದು, ಖಂಡಿತವ ಕಡೆಗಿಡುತ್ತಿಹುದು, ಬಂಡುಂಬ ಭ್ರಮರದಂತೆ ಮಂಡಲತ್ರಯದ ಮಧ್ಯದಲ್ಲಿ ನಿರ್ಮಲಬೆಳಗ ಸೇವಿಸುತ್ತಿಹುದು ಗುರುನಿರಂಜನ ಚನ್ನಬಸವಲಿಂಗವ ಮುಟ್ಟಿ.