ಪ್ರಾಣಲಿಂಗವಾದ ಬಳಿಕ ಪ್ರಾಣದಲ್ಲಿ ಗುಣವಿರಲುಂಟೆ?
ಪ್ರಪಂಚ ತೋರಲುಂಟೆ?
ಸಂಕಲ್ಪಭ್ರಮೆಯುಂಟೆ?
ಅಜ್ಞಾನ ಸುಜ್ಞಾನ ಆವರಿಸಲುಂಟೆ?
ಮಾಯಾಮೋಹ ಮಲದಲ್ಲಿ ಮಗ್ನತೆಯುಂಟೆ?
ಇಂತು ಸಕಲ ಸಂಭವಿತನಾಗಿ
ನಾನು ಪ್ರಾಣಲಿಂಗಸಂಬಂಧಿಯೆಂದರೆ
ಕಾಲನ ಕರ್ಮ ಕಡೆಗಾಣದಿರ್ದನು,
ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾಗಿ.
Art
Manuscript
Music
Courtesy:
Transliteration
Prāṇaliṅgavāda baḷika prāṇadalli guṇaviraluṇṭe?
Prapan̄ca tōraluṇṭe?
Saṅkalpabhrameyuṇṭe?
Ajñāna sujñāna āvarisaluṇṭe?
Māyāmōha maladalli magnateyuṇṭe?
Intu sakala sambhavitanāgi
nānu prāṇaliṅgasambandhiyendare
kālana karma kaḍegāṇadirdanu,
guruniran̄jana cannabasavaliṅgakke dūravāgi.