ರೇಚಕ ಪೂರಕ ಕುಂಭಕವಿಡಿದು ಮಾಡಿ ಮಾಡಿ ಕೆಟ್ಟರು
ಅನಂತ ಬರಿಯ ಹಿರಿಯರು.
ಅರಿದು ಮರೆದು ನೆರೆದು ನಿಂದಲ್ಲಿ
ಹೊರಗೊಳಗೆ ತುಂಬಿ ತೋರಿತ್ತು
ಗುರುನಿರಂಜನ ಚನ್ನಬಸವಲಿಂಗದ ಬೆಳಗು.
Art
Manuscript
Music
Courtesy:
Transliteration
Rēcaka pūraka kumbhakaviḍidu māḍi māḍi keṭṭaru
ananta bariya hiriyaru.
Aridu maredu neredu nindalli
horagoḷage tumbi tōrittu
guruniran̄jana cannabasavaliṅgada beḷagu.