ಆರಾರರಿಂದೆ ಮೀರಿದ ಅಪ್ರತಿಮಲಿಂಗವ
ಆರಿಸಿಕೊಂಡ ಬಳಿಕ
ಅರಿದರಿದಾಚರಿಸಲರಿಯದೆ,
ಪುರಾಣವಾಕ್ಯವನರಿದು ಕಾಂಬುವೆನೆಂದು
ಸತ್ಕ್ರಿಯಾ ಸುಜ್ಞಾನ ಬಾಹ್ಯನಾಗಿ,
ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ
ಧ್ಯಾನ ಧಾರಣ ಸಮಾಧಿಗಳೆಂಬ
ಅಷ್ಟಾಂಗಯೋಗಾಭ್ಯಾಸದಿಂದ ಕಷ್ಟ ಕಡೆಗಾಣದೆ
ಕೆಟ್ಟು ಹೋಗಿಬರುವ ಮಿಟ್ಟೆಯ
ಭಂಡರ ಎನಗೊಮ್ಮೆ ತೋರದಿರಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Ārārarinde mīrida apratimaliṅgava
ārisikoṇḍa baḷika
aridaridācarisalariyade,
purāṇavākyavanaridu kāmbuvenendu
satkriyā sujñāna bāhyanāgi,
yama niyamāsana prāṇāyāma pratyāhāra
dhyāna dhāraṇa samādhigaḷemba
aṣṭāṅgayōgābhyāsadinda kaṣṭa kaḍegāṇade
keṭṭu hōgibaruva miṭṭeya
bhaṇḍara enagom'me tōradirā
guruniran̄jana cannabasavaliṅgā.