Index   ವಚನ - 478    Search  
 
ಸೂರ್ಯ ಚಂದ್ರ ಅಗ್ನಿಯೆಂಬ ಮಂಡಲಮಧ್ಯದಲ್ಲಿ ತೋರುವ ಪ್ರಚಂಡಮೂರುತಿಯ ಕಂಡೆನಯ್ಯಾ. ಕಂಡೆನೆಂಬ ಕಾಯವಂತರಿಗೆ ಕಾಣದಿರ್ಪ ನೋಡಾ! ಕಾಣೆನೆಂಬ ಕಲ್ಪರಹಿತರಿಗೆ ಕಾಣುತಿರ್ಪ ನೋಡಾ! ಆತನೇ ಎನ್ನ ಪ್ರಾಣಲಿಂಗ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.