Index   ವಚನ - 477    Search  
 
ಪಂಚವಕ್ತ್ರದ ಮಿಂಚು ಮೈ ಸೋಂಕಿ ಪಂಚವಕ್ತ್ರನ ಸಂಚವನರಿಯದೆ ಕೆಂಚ ಕರಿಕರತ್ತಿತ್ತಾದರಲ್ಲಾ! ಪಂಚ ಪಂಚವದಾಟಿ ಗೊಂಚಲ ಫಳಿಕಿನಲ್ಲಿ ಹೊಳೆವ ಪರಶಿವಲಿಂಗವನು, ಪರಿಪರಿಯಿಂದೆ ಕಂಡು ಪರಮಸುಖಿಯಾಗಿರ್ದೆನು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.