ಭೂಮಿಯನುರುಹಿ ತನ್ನ ನೋಡಿ ಅರ್ಚಿಸುವರಾರಯ್ಯಾ?
ಜಲವ ದಹಿಸಿ ತನ್ನ ನೋಡಿ ಅರ್ಚಿಸುವರಾರಯ್ಯಾ?
ಅನಲನ ಸುಟ್ಟು ತನ್ನ ನೋಡಿ ಅರ್ಚಿಸುವರಾರಯ್ಯಾ?
ಅನಿಲವ ದಗ್ಧ ಮಾಡಿ ತನ್ನ ನೋಡಿ ಅರ್ಚಿಸುವರಾರಯ್ಯಾ?
ಭಾವವ ದಹನವ ಮಾಡಿ ತನ್ನ ನೋಡಿ ಅರ್ಚಿಸುವರಾರಯ್ಯಾ?
ಕರ್ತಾರನ ಕರ್ಮವನುರುಹಿ ತನ್ನ ನೋಡಿ ಅರ್ಚಿಸುವರಾರಯ್ಯಾ?
ಸಕಲವನುರುಹಿ ಬೆಳಗ ಮಾಡಿ ಕೂಡ ಅರ್ಚಿಸುವರಾರಯ್ಯಾ?
ಅಪ್ರತಿಮಶರಣರಲ್ಲದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.