Index   ವಚನ - 526    Search  
 
ಷಡುದರ್ಶನಗತಿಯ ಮರೆದೊಮ್ಮೆ ಕೇಳನಯ್ಯಾ. ಯೋಗಮಾರ್ಗಿಗಳ ನಿರೀಕ್ಷಣೆಯ ಮಾಡನಯ್ಯಾ. ವೇದಾಂತಿಗಳ ಕೂಡೆ ಮಾತನಾಡನಯ್ಯಾ. ಸಿದ್ಧಾಂತಿಗಳ ಕ್ರೀಯ ಸೋಂಕನಯ್ಯಾ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಕಲೇಂದ್ರಿಯನಳಿದಿರ್ದನಾಗಿ.