Index   ವಚನ - 534    Search  
 
ಸಿಂಹದ ಹಾಲು ತಂದು ಶುನಕಂಗಿತ್ತು ಸಲಹಿದರೆ ನಡೆ ನುಡಿಯಲ್ಲಿ ಶುನಕನಲ್ಲದೆ ಸಿಂಹನಾಗಿತ್ತೆ? ಮಹಾನುಭಾವ ಜ್ಞಾನಗುರುವಿನ ಬೋಧಸುಧೆಯನು ತನು ಮನ ಭಾವ ಪ್ರಕೃತಿಯುಕ್ತ ನರನಿಗಿತ್ತಡೆ ನಡೆ ನುಡಿಯಲ್ಲಿ ಪೂರ್ವಪ್ರಕೃತಿಯುಕ್ತ ನರನಲ್ಲದೆ ಸತ್ಕ್ರಿಯಾಜ್ಞಾನಾನುಭಾವಿಯಾದಾನೆಯೇ? ಆಗಲರಿಯನು. ಅದು ಕಾರಣ, ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವಾದ ಅಂಶಿಕರಿಗಲ್ಲದೆ ಆಗಬಾರದು ಕಾಣಾ.