ಆದಿ ಅನಾದಿಯಿಂದತ್ತತ್ತಲಾದ
ಮಹಾಘನಾನಂದಪ್ರಕಾಶಪ್ರಸಾದವ ಕಂಡ ಶರಣಂಗೆ,
ಬ್ರಹ್ಮ ವಿಷ್ಣು ಇಂದ್ರಾದಿ ಮನುಮುನಿಗಳ
ಅನಿತ್ಯಪದವೊಂದು ತೃಣವಾಗಿಪ್ಪುದು.
ಅದೇನು ಕಾರಣವೆಂದೊಡೆ :
ಅನಂತ ಗುಣಧರ್ಮದಿಂದಾದ ಸಕಲ ಸಂಭ್ರಮವು,
ಅಂತಪ್ಪ ಶರಣ ತನ್ನ ವಿನೋದಕಾರಣ
ಲೀಲೆಯನವಧರಿಸಿದನಲ್ಲದೆ,
ಮಲಬದ್ಧ ಮೂಢ ವೇಷಧಾರಿ ಪಾಷಂಡಿಗಳಂತೆ
ಹೊನ್ನೇ ಪ್ರಾಣ, ಮಣ್ಣೇ ಪ್ರಾಣವಾಗಿ,
ಸಿಂಬಳದಲ್ಲಿ ಸಿಗಬಿದ್ದ ಮಕ್ಷುಕನಂತೆ ಬಿದ್ದು ಹೋಗಬಂದವನಲ್ಲ.
ಮತ್ತೆಂತೆದೊಡೆ :
ತನ್ನಂಶೀಭೂತರನರಸುತ್ತ ಅಡಿಗೆರಗಿನಿಂದವರಿಗೆ ಅನುವ ತೋರುತ್ತ,
ಘನಮಹಿಮ ಗುರುಚರಶೇಷಾಮೃತವ ಸೇವಿಸುತ್ತ
ತನತನಗೆ ಸುಜ್ಞಾನ ಸದ್ಭಕ್ತಿಯಿಂದರಿದು ಬಂದುದ ನೋಡಿ
ಪರಮವೈರಾಗ್ಯದಿಂದೆ ಕೈಕೊಂಡು ಪಾವನಸ್ವರೂಪನಾಗಿ ಚರಿಸುವ
ನಮ್ಮ ಗುರುನಿರಂಜನ ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Ādi anādiyindattattalāda
mahāghanānandaprakāśaprasādava kaṇḍa śaraṇaṅge,
brahma viṣṇu indrādi manumunigaḷa
anityapadavondu tr̥ṇavāgippudu.
Adēnu kāraṇavendoḍe:
Ananta guṇadharmadindāda sakala sambhramavu,
antappa śaraṇa tanna vinōdakāraṇa
līleyanavadharisidanallade,
malabad'dha mūḍha vēṣadhāri pāṣaṇḍigaḷante
Honnē prāṇa, maṇṇē prāṇavāgi,
simbaḷadalli sigabidda makṣukanante biddu hōgabandavanalla.
Mattentedoḍe:
Tannanśībhūtaranarasutta aḍigeraginindavarige anuva tōrutta,
ghanamahima gurucaraśēṣāmr̥tava sēvisutta
tanatanage sujñāna sadbhaktiyindaridu banduda nōḍi
paramavairāgyadinde kaikoṇḍu pāvanasvarūpanāgi carisuva
nam'ma guruniran̄jana cannabasavaliṅgadalli.
ಸ್ಥಲ -
ಪ್ರಾಣಲಿಂಗಿಯ ಪ್ರಸಾದಿಸ್ಥಲ