Index   ವಚನ - 542    Search  
 
ನವಖಂಡಮಂಡಲದೊಳಗೆ ಬೀಸುವ ಗಾಳಿಯ ತಡೆದು ಬೀಸುವುದೊಂದು ರೂಪು. ಮೂರಾರು ದ್ವಾರದವರಂದವ ಕೆಡಿಸಿ ಸುಳಿವುದೊಂದು ರೂಪು. ಎರಡೈದು ದುಃಖವನು ಐದು ವರತೆಯೊಳು ತೊಳೆದು ಸೇವಿಸುವುದೊಂದು ರೂಪು. ಇಂತು ರೂಪತ್ರಯಾನಂದವಳಿದುಳಿದ ಸುಖಿ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಪ್ರಾಣಲಿಂಗಿ.