Index   ವಚನ - 546    Search  
 
ಸುಖ-ದುಃಖ, ಪುಣ್ಯ-ಪಾಪ, ಸ್ವರ್ಗ-ನರಕವೆಂಬ ದ್ವಂದ್ವ ಕರ್ಮಂಗಳನು ಸಾಕ್ಷಿಕನಾಗಿ ನೋಡುವಾತ ತಾನೆಂದರಿಯದೆ ಮಾಡುವರೊಂದೊಂದ, ಕೇಳುವರೊಂದೊಂದ, ನೋಡುವರೊಂದೊಂದ. ಬೆಂದ ಒಡಲ ಬೇರಿಟ್ಟು ಬೆಳಗಿನಲ್ಲಿ ಬೆಳಗಿಂತುಕೊಂಡು ಸುಖಮಯನಾದಾತನೇ ಪ್ರಸಾದಿ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.