Index   ವಚನ - 548    Search  
 
ಪ್ರಾಣಲಿಂಗವಾದ ಬಳಿಕ, ಕಾಯದಲ್ಲಿ ನೋಡಿದರೆ ಲಿಂಗಬೆಳಗು, ಮನದಲ್ಲಿ ನೋಡಿದರೆ ಲಿಂಗಬೆಳಗು, ಭಾವದಲ್ಲಿ ನೋಡಿದರೆ ಲಿಂಗಬೆಳಗು, ಸರ್ವಾಂಗದಲ್ಲಿ ನೋಡಿದರೆ ಲಿಂಗಬೆಳಗು. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಪ್ರಾಣಲಿಂಗಿ ಬೆಳಗಿನೊಳು ಬೆಳಗ ಸೇವಿಸುತಿರ್ದನು.