ಗಂಡನ ಚಿತ್ತವನರಿದು ಒತ್ತೆಯನಿತ್ತ
ಒಲುಮೆ ಗೆಲುವಾಗಿತ್ತು ನೋಡಾ!
ಲಿಂಗದ ಬೆಳಗನರಿದ ಕಳೆಯನೊತ್ತೆಯು ಕಲ್ಪವೃಕ್ಷ ಕಾಣಾ!
ಅರಿಯದ ಗುದ್ಯಾಟ ಬರಿಗೈಯ ಸುರಿದಂತೆ
ಪರಿಣಾಮದ ಪ್ರಭೆಯಿಲ್ಲ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ!
Art
Manuscript
Music
Courtesy:
Transliteration
Gaṇḍana cittavanaridu otteyanitta
olume geluvāgittu nōḍā!
Liṅgada beḷaganarida kaḷeyanotteyu kalpavr̥kṣa kāṇā!
Ariyada gudyāṭa barigaiya suridante
pariṇāmada prabheyilla kāṇā
guruniran̄jana cannabasavaliṅgā!
ಸ್ಥಲ -
ಪ್ರಾಣಲಿಂಗಿಯ ಶರಣಸ್ಥಲ