ಪುರುಷನ ಪುಣ್ಯದಿಂದ ಉಟ್ಟಸೀರೆ,
ಪುರುಷನ ಪುಣ್ಯದಿಂದಿಟ್ಟಾಭರಣ,
ಪುರುಷನ ಪುಣ್ಯದಿಂದಾಯಿತ್ತು ಮುತ್ತೈದೆತನ.
ಜವ್ವನದ ಸೊಬಗಿನ ಬೆಳಗ ಪುರುಷನನೊಂಚಿಸಿ
ಪರಪುರುಷರ ನೆರೆದರೆ ಪತಿವ್ರತಕ್ಕೆ ಭಂಗ.
ಲೋಕದವರಿಗೆ ಹೇಸಿಕೆ, ಕಡೆಗೆ ನರಕ.
ಶಿವನಿಂದಾದ ಸುಜ್ಞಾನತನು, ಶಿವನಿಂದಾದ ಗುರುಕರುಣ,
ಶಿವನಿಂದಾದ ಶರಣತ್ವ,
ತನ್ನ ತನು ಮನ ಪ್ರಾಣದ ಕಳೆಯ ಬೆಳಗ ವಂಚಿಸಿ
ಅನ್ಯದೈವ, ಪರಸಮಯ, ಮಲತ್ರಯಕ್ಕಿಚ್ಛೈಸಿತ್ತದೆ
ಸತ್ಪಾತ್ರಕ್ಕೆ ಭಂಗ, ಸಮಯಾಚಾರಕ್ಕೆ ಹೇಸಿಕೆ,
ಕಡೆಗೆ ದುರ್ಗತಿ ಕಾಣಾ ಗುರುನಿರಂಜನ
ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Puruṣana puṇyadinda uṭṭasīre,
puruṣana puṇyadindiṭṭābharaṇa,
puruṣana puṇyadindāyittu muttaidetana.
Javvanada sobagina beḷaga puruṣananon̄cisi
parapuruṣara neredare pativratakke bhaṅga.
Lōkadavarige hēsike, kaḍege naraka.
Śivanindāda sujñānatanu, śivanindāda gurukaruṇa,
śivanindāda śaraṇatva,
tanna tanu mana prāṇada kaḷeya beḷaga van̄cisi
an'yadaiva, parasamaya, malatrayakkicchaisittade
satpātrakke bhaṅga, samayācārakke hēsike,
kaḍege durgati kāṇā guruniran̄jana
cannabasavaliṅgā.
ಸ್ಥಲ -
ಪ್ರಾಣಲಿಂಗಿಯ ಶರಣಸ್ಥಲ