Index   ವಚನ - 552    Search  
 
ಹಿಂದೇನರಿಯದೆ, ಮುಂದೆ ತಿಳಿಯದೆ, ಸಂದಿನ ಮಂಜಿನ ಸುಖದಲ್ಲಿರ್ದು, ನಿರಂಜನಲಿಂಗಸನ್ನಿಹಿತರೆಂಬುವ ನಂಜುಭಾವರ ನಡೆನುಡಿಯ ಕಂಡು, ಬಿಡುಮುಖದಿಂದೆ ಗಹಗಹಿಸುವರಯ್ಯಾ ಪ್ರಾಣಲಿಂಗಿಗಳು. ಗುರುನಿರಂಜನ ಚನ್ನಬಸವಲಿಂಗದಡಿಗತ್ತತ್ತ ಬೇಡವೆಂದು ನೂಂಕುವರಯ್ಯಾ.