Index   ವಚನ - 554    Search  
 
ತಪ್ಪಿಸಿ ಒಪ್ಪಿಸಿ ಒಲಿಸಿಕೊಂಡು ಬಂದು ನಡೆವ ಮಡದಿಯ ಸಡಗರವ ನೋಡಾ! ಕಡುಲೋಭಿ ಮನೆಯಗಂಡನೊಂದಿಗೆ ಬಾಳಿ ಅರಳುಪ್ಪರಿಗೆಯಲ್ಲಿ ಸುಪ್ಪತ್ತಿಗೆಯ ಮೇಲೆ ಸುಳಿದಾಡುವ, ಶುದ್ಧನ ಕಳೆಯ ನೆರೆದಪ್ಪಿ ಕಾಣುವಳು ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ.