Index   ವಚನ - 564    Search  
 
ಹಂಗಿಲ್ಲದ ಉದ್ಯೋಗ ಭಂಗವಿಲ್ಲ ಕಾಣಾ. ಅಗಸನ ಕಾರ್ಯದಂತೆ ಅಚಲನಾಗಿ, ತಿಳಿಗಾಜಿನಗುಪ್ಪಿಯಂತೆ ಜ್ಯೋತಿರ್ಲಿಂಗ ಪ್ರಾಣವೇದಿಸಿ ಕತ್ತಲಕ್ಕಿಂಬಿಲ್ಲದೆ ಕರ್ತು ಗುರುನಿರಂಜನ ಚನ್ನಬಸವಲಿಂಗದ ಪ್ರಭೆಯೊಳಡಗಿರ್ದ ಶರಣ.