ನಿರ್ಮನವೆಂಬ ಭೂಮಿಯಮೇಲೆ ಚಿದ್ವೃಷ್ಟಿಗರೆಯಲು,
ಹದನರಿದು ಹಲಾಯುಧ
ಮೂರುತಾಳಕೂರಿಗೆಯಿಂದ ಬಿತ್ತಿದಲ್ಲಿ
ಒಂದಂಕುರದಿಂದಂಕುರಿಸಿದ ಪೈರದಿ
ಸಕಲ ಚರಾಚರಕ್ಕೆ ಸೌಖ್ಯದೋರಿ,
ಉರಹಿತಂಗೆ ಉಲ್ಲಾಸವಾಗಿ,
ತೆರಿಗೆಯ ಹೊನ್ನ ಒಂದೆರಡು ಹಪ್ತಿಯ ಮಾಡಿಕೊಟ್ಟು,
ಹಿರಿಯರ ಗತಿಹಿಂಗದೆ ಮಂಗಳಮಂಟಪದಲ್ಲಿರ್ಪ
ಮಹಾರಾಜನ ಪ್ರಭೆಯಲ್ಲಡಗಿ,
ಮನೆ ಹೊಲ ಸುಖ ಮರೆದು ಮರುಳುಗೊಂಡರೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಪ್ರಾಣಲಿಂಗೈಕ್ಯ ತಾನೆ.
Art
Manuscript
Music
Courtesy:
Transliteration
Nirmanavemba bhūmiyamēle cidvr̥ṣṭigareyalu,
hadanaridu halāyudha
mūrutāḷakūrigeyinda bittidalli
ondaṅkuradindaṅkurisida pairadi
sakala carācarakke saukhyadōri,
urahitaṅge ullāsavāgi,
terigeya honna onderaḍu haptiya māḍikoṭṭu,
hiriyara gatihiṅgade maṅgaḷamaṇṭapadallirpa
mahārājana prabheyallaḍagi,
mane hola sukha maredu maruḷugoṇḍare
guruniran̄jana cannabasavaliṅgadalli
prāṇaliṅgaikya tāne.
ಸ್ಥಲ -
ಪ್ರಾಣಲಿಂಗಿಯ ಐಕ್ಯಸ್ಥಲ