ನಿಧಾನವ ಸಾಧಿಸಿದವರಿಗೆ ವಿಗುರ್ಬಣೆ ಕಾಡುವುದು.
ಅದಕ್ಕಂಜಲಾಗದು ಬೆಚ್ಚಲಾಗದು ಬೆದರಲಾಗದು.
ಹೊನ್ನು ಹೆಣ್ಣು ಮಣ್ಣು ಈ ತ್ರಿವಿಧಮಾಯವ ತೋರಿ,
ಹೆರತೆಗೆಸುವನಾಗಿ!
ಸತಿಪುರುಷಸಂಯೋಗದ ವೇಳೆಯಲ್ಲಿ
ಜೀವಧನ ಬಿಟ್ಟುಕೊಂಡು ಮಡಕೆಯನೂಕುವುದು.
ಇದಿರ ಜೀವಧನ ಬಿಟ್ಟುಕೊಂಡು ಮನೆಯ ಹಿಂದನುಚ್ಚುವುದು.
ಬೆಕ್ಕು ನೆಲಹಿಗೆ ತುಡುಕುವುದು.
ನಾಯಿ ಮನೆಯ ಹೊರಗೆ ಹೊಂಚಿಕೊಂಡಿಹುದು.
ಮಗುವು ಮೊಲೆಗೆ ಅಳುವುದ ಕೇಳಿ-
ಇವೆಲ್ಲವ ಸಂತವಿಟ್ಟು ಬಂದು ಪುರುಷನ ನೆರೆವಳು,
ಇದು ಸಜ್ಜನಸ್ತ್ರೀಯ ಲಕ್ಷಣವು!
ಇಂತಪ್ಪ ಆ ತವಕ ನಿನಗಳವಟ್ಟಿತ್ತು ಬಸವಾ
ಆ ಗುಹೇಶ್ವರನ ಸಂಯೋಗದ ವೇಳೆಯಲ್ಲಿ!
Hindi Translationसंपदा साधितों को डर सताता है।
उससे न डरना, न व्याकुल होना, न घबराना ।
सोना, स्त्री, मिट्ठी इन त्रिविध माया दिखाकर पीछे हठाते !
सति पुरुष संयोग के समय में
जीवनधन त्यागकर मटका ढकेलना।
सामने जीवधन त्यागकर घर के पीछे खोलना,
बिल्ली छींका ढूँढती है, कुत्ता घर के बाहर घात में बैठा है ।
बच्चा स्तन के लिए रोना सुन-
इन सबको समाधान कर आकर पुरुष से मिली,
यह गृहिणी का लक्षण।
ऐसी चाह तुझमें रहा था बसवा
वह गुहेश्वरा संयोग के समय में।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura