•  
  •  
  •  
  •  
Index   ವಚನ - 1288    Search  
 
ನಿಮ್ಮ ತೇಜವ ನೋಡಲೆಂದು ಹೆರಸಾರಿ ನೋಡುತ್ತಿರಲು ಶತಕೋಟಿ ಸೂರ್ಯರು ಮೂಡಿದಂತೆ ಇರ್ದುದಯ್ಯಾ! ಮಿಂಚಿನಬಳ್ಳಿಯ ಸಂಚವ ಕಂಡಡೆ, ಎನಗಿದು ಸೋಜಿಗವಾಯಿತ್ತು! ಗುಹೇಶ್ವರಾ ನೀನು ಜ್ಯೋತಿರ್ಲಿಂಗವಾದಡೆ ಉಪಮಿಸಿ ನೋಡಬಲ್ಲವರಿಲ್ಲಯ್ಯಾ.
Transliteration Nim'ma tējava nōḍalendu herasāri nōḍuttiralu śatakōṭi sūryaru mūḍidante irdudayyā! Min̄cinabaḷḷiya san̄cava kaṇḍaḍe, enagidu sōjigavāyittu! Guhēśvarā nīnu jyōtirliṅgavādaḍe upamisi nōḍaballavarillayyā.
Hindi Translation तुम्हारे तेज देखने पीछे हटकर देखे तो, शत करोड़ सूर्य उगे जैसे रहा था अय्या! बिजली समूह का संग्रह देखे तो, मुझे यह आश्चर्य हुआ था, गुहेश्वरा तू ज्योतिर्लिंग हो तो उपमा से देखनेवाला नहीं। Translated by: Eswara Sharma M and Govindarao B N