Index   ವಚನ - 608    Search  
 
ಕರ್ಮವ ಜರಿದು ಕಾಯದಲ್ಲಿ ಅರಿದು, ಕರ್ಮವ ಹೊದ್ದದಿಪ್ಪುದೇ ಶರಣಸ್ಥಲ. ಸಂಶಯಕಲ್ಪನೆಯ ಕಳೆದು ಮನದಲ್ಲಿ ಅರಿದು, ಆ ಸಂಶಯಕಲ್ಪನೆಯ ಹೊದ್ದದಿರ್ಪುದೇ ಶರಣಸ್ಥಲ. ಭ್ರಾಂತನಳಿದು ಭಾವದಲ್ಲಿ ಅರಿದು ಆ ಭ್ರಾಂತ ಹೊದ್ದದಿರ್ಪುದೇ ಶರಣಸ್ಥಲ. ನಿತ್ಯಾನಿತ್ಯವರಿದು ಚಿತ್ತ ಗುರುನಿರಂಜನ ಚನ್ನಬಸವಲಿಂಗಕ್ಕೆ ಅಚ್ಚೊತ್ತಿ ಅರಿಯದಿರ್ಪುದೇ ಅನಾದಿಶರಣಸ್ಥಲ ಕಾಣಾ.