Index   ವಚನ - 609    Search  
 
ಕಾರಣಮಾತನರಿವ ಕಲ್ಪಿತಭರಿತನಲ್ಲದೆ ಅಕಾರಣಮಾತನರಿಯನಯ್ಯಾ. ಕಾರ್ಯನಾಗಿ ಕಾರಣಾನುಕೂಲಿಗಾಸ್ಪದನಲ್ಲದೆ ಅಕಾರ್ಯನಾಗಿ ಅಕಾರಣಾನುಕೂಲಿಗಾಸ್ಪದವಿರಹಿತನಯ್ಯಾ. ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಶರಣ ಅನುಪಮಸುಖಿ.