Index   ವಚನ - 628    Search  
 
ಲಿಂಗಾಚಾರ ಭೃತ್ಯಾಚಾರ ಶಿವಾಚಾರ ಗಣಾಚಾರ ಸದಾಚಾರ ಕ್ರಿಯಾಚಾರ ಜ್ಞಾನಾಚಾರ ಭಾವಾಚಾರ ಸತ್ಯಾಚಾರ ನಿತ್ಯಾಚಾರ ಧರ್ಮಾಚಾರ ಸರ್ವಾಚಾರಸಂಪತ್ತೆಂಬ ಪ್ರಸಾದಲಿಂಗಸನ್ನಿಹಿತ ಶರಣಂಗೆ ವ್ರತ ನಿಯಮ ಛಲಾದಿ ಮಿಥ್ಯಾಚಾರವೇನೂ ಪ್ರಯೋಜನವಲ್ಲ ಕಾಣಾ. ಇದನರಿಯದೆ ಹಾದಿ ಬೀದಿಯ ಸಾಧಕರ ಮಾತಕೇಳಿ ಖಂಡಿತಕ್ರಿಯೆಯಿಂದ ಕಷ್ಟಬಡುತ ಅಖಂಡಮಯ ಲಿಂಗ ತಾನೆಂಬ ಭಾವವಳಿದು ನೀನು ನಾನೆಂದು ಬೆಂದು ಭವಗಂಡರು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.