Index   ವಚನ - 648    Search  
 
ಗುರುವಿನಿಂದುದಯವಾಗಿ ಬಂದವರೆಂದು ಹೇಳುವರು ಹಲ್ಲಿಗೆ ಶಿಲ್ಕದ ನಾಲಿಗೆಯ ಸಾಕಿದವರ ಸರಸವ ನೋಡಾ! ಗುರುವೆಂಬುದ ಕಂಡರಿಯರು, ಲಿಂಗವೆಂಬುದ ಕಂಡರಿಯರು, ಜಂಗಮವೆಂಬುದ ಕಂಡರಿಯರು, ಪ್ರಸಾದವೆಂಬುದ ಕಂಡರಿಯರು. ಇಂತು ಕಂಡರಿಯದೆ ಕಂಡಕಂಡಂತೆ ನುಡಿದು ತಪ್ಪಿ ಬಿದ್ದುಹೋಗುವ ಚಂಡ ಚರ್ಮಗೇಡಿ ಹೀನಮಾನವರನೆಂತು ಶರಣಕವಳಿಗೆ ಸರಿಯೆನ್ನಬಹುದು ಗುರುನಿರಂಜನ ಚನ್ನಬಸವಲಿಂಗಾ.