Index   ವಚನ - 667    Search  
 
ಅಯ್ಯಾ, ತಮ್ಮಲ್ಲರಿಯದೆ ನಿಮ್ಮ ನೋಡುವರಯ್ಯಾ. ತಮ್ಮಲ್ಲರಿಯದೆ ನಿಮಗೆ ಮಾಡುವರಯ್ಯಾ. ತಮ್ಮಲ್ಲರಿಯದೆ ನಿಮ್ಮನು ಕೂಡಬೇಕೆಂದು ಆಯಾಸಬಡುವರಯ್ಯಾ. ಇದನರಿದು ಭಿನ್ನವಳಿದು ಅಭಿನ್ನಭಕ್ತಿಯೊಳಾನಂದಮುಖನಾಗಿರ್ದೆ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.