Index   ವಚನ - 689    Search  
 
ಆರಾರ ಮೇಲಿಂದತ್ತತ್ತ ತೋರುವ ನಿರವಯ ತಾನೆಂದರಿದ ಮೇಲೆ ತನುವಿನಲ್ಲಿ ತಾಮಸ ಅವಿದ್ಯೆ ತೋರಲು ಕಾರಣವೇನು? ಪರಮಲೀಲಾಸ್ಪದಕ್ಕೆ ನಿಂದುದಾಗಿ. ಮನದಲ್ಲಿ ಸಂಕಲ್ಪ ವಿಕಲ್ಪ ಕರಣಕರ್ಕಶ ಸುಳಿಯಲು ಕಾರಣವೇನು? ಶಿವಲೀಲಾ ಸೂಕ್ಷ್ಮಾಸ್ಪದಕ್ಕೆ ನಿಂದುದಾಗಿ. ಭಾವದಲ್ಲಿ ವಿಷಯಭ್ರಾಂತಿ ಸೂಸಲು ಕಾರಣವೇನು? ಪರಶಿವಲೀಲಾ ಕಾರಣಾಸ್ಪದಕ್ಕೆ ನಿಂದುದಾಗಿ. ಇಂತು ತೋರಲರಿಯದ ಠಾವಿನಲ್ಲಿ ತೋರಿಕಾಣಿಸಲು ಶರಣಲಿಂಗಸಂಬಂಧಿಗಳೆಂಬ ವಾಗದ್ವೈತಕ್ಕೆ ನಾಚಿಕೆ ಬಾರದೇಕೆ ಗುರುನಿರಂಜನ ಚನ್ನಬಸವಲಿಂಗದಂಗವನರಿಯದ ಯೋನಿಸೂತಕರಿಗೆ?