Index   ವಚನ - 690    Search  
 
ತನುಮನಭಾವವನಿತ್ತು ತ್ರಿವಿಧಲಿಂಗಸನ್ನಿಹಿತನಾದ ಶರಣಂಗೆ ತನುಲಿಂಗಭಾವವಲ್ಲದೆ ಪ್ರಕೃತಿಭಾವವುಂಟೆ? ಮನಲಿಂಗಭಾವವಲ್ಲದೆ ಪ್ರಕೃತಿಭಾವವುಂಟೆ? ಭಾವಲಿಂಗಭಾವವಲ್ಲದೆ ಪ್ರಕೃತಿಭಾವವುಂಟೆ? ತನುಮನಭಾವ ಪ್ರಕೃತಿಯಲ್ಲಿ ವರ್ತಿಸಿ ಲಿಂಗಾಂಗಸಂಬಂಧಿಗಳೆಂಬ ಮಂಗ ಹೊಲೆಯ ಭಂಗರುಗಳನೇನೆಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.