Index   ವಚನ - 698    Search  
 
ಹೊರಗೊಳಗೆಂಬ ಕುಳವರಿಯದ ಪರಿಪೂರ್ಣ ಶರಣಂಗೆ ಮರಮರಳಿ ತೋರುವ ಮನ ಭಾವ ಜ್ಞಾನ ಮುಂದೆಯಿಲ್ಲ ಕಾಣಾ. ಸಂದುಸಂಶಯ ದಂದುಗ ಬೆಂದು ನಿಂದು ನಿಜವೆರೆದ ಬಳಿಕ ಎಂತಿರ್ದಂತೆ ತಾನೆ ನೋಡಾ. ಈ ಅನುವನರಿಯಲರಿಯದೆ ಅಸಾಧ್ಯ ನುಡಿಯ ಹೊತ್ತು ಮಾಯಗೂಡಿ ಹೋದರೆ, ಕಂಗುರುಡರು ಕಾಂತಾರದಲ್ಲಿ ಕಡಿದಾಡಿ ಮಡಿದಂತಾಯಿತ್ತು ಗುರುನಿರಂಜನ ಚನ್ನಬಸವಲಿಂಗವನರಿಯದೆ.